ಅದೆಲ್ಲ ಸರಿ!
ಇದರಿಂದ ನನಗೇನು ಲಾಭ?

ಹೌದು! ಅದು ಹಾಗೆ ಅನಿಸುತ್ತೆ. ಯಾರು ಏನೇ ಹೇಳಿದರೂ, ಇದರಿಂದ ನನಗೇನು ಲಾಭ? ಎಂಬ ಪ್ರಶ್ನೆಗೆ ಉತ್ತರ ಸಿಗಲಿಲ್ಲವೆಂದರೆ ಯಾವ ಕೆಲಸವನ್ನು ಮಾಡಲು ಉತ್ಸಾಹವೇ ಇರುವುದಿಲ್ಲ….
ನಿಮ್ಮ ಯಶಸ್ಸಿನ ದಾರಿ ಸುಗಮವಾಗಿರಲೆಂದು ‘ಇಷ್ಟೇನಾ!’ದ 1000 ಬುಕ್ಸ್ ಗಳು ಓದುಗರನ್ನು ತಲುಪಿ, ದ್ವಿತೀಯ ಮುದ್ರಣಗೊಂಡು ನಿಮಗೋಸ್ಕರ ಕಾಯುತ್ತಿದೆ!

ನಮ್ಮ ಬದಲಾವಣೆ ಯಾರಿಂದ? ಯಾವುದರಿಂದ ? ಯಾವಾಗ? ಮತ್ತು ಹೇಗೆ? ಪ್ರೇರಿತವಾಗುತ್ತದೆ ಎಂಬ ಸುಳಿವನ್ನು ಜೀವನವು ಸೂಕ್ಷ್ಮವಾಗಿ ಹೇಳುತ್ತಿರುತ್ತದೆ. ಸಿಕ್ಕ ಸುಳಿವನ್ನು ಅರ್ಥ ಮಾಡಿಕೊಂಡು, ಬಳಸಿಕೊಂಡರೆ ಯಶಸ್ಸಿನ ಹತ್ತಿರ ಹೋಗುತ್ತಿದ್ದಿರೆಂದೇ ಅರ್ಥ.

ಇಷ್ಟೇನಾ! ಬುಕ್ ನ ಆಶಯವೂ ಅದೇ. ನಿಮ್ಮಲ್ಲಿ ಸಣ್ಣ ಸಣ್ಣ ಬದಲಾವಣೆಗಳನ್ನು ಮಾಡಿಸುತ್ತಾ , ಜೀವನದಲ್ಲಿ ಬರುವ ಚ್ಯಾಲೆಂಜಸ್ ಗಳನ್ನು ಸರಳವಾಗಿ ಎದುರಿಸುವಂತೆ ಮಾಡುತ್ತಾ ಈಗಾಗಲೇ 1000 ಬುಕ್ಸ್ ಓದುಗರನ್ನು ತಲುಪಿ,ಎರಡನೇ ಎಡಿಶನ್ ಪ್ರಿಂಟ್ ಆಗಿ ನಿಮ್ಮನ್ನೂ ಯಶಸ್ಸಿನ ಹಾಗೂ ಸಂತೋಷದ ಜೀವನದ ಹಾದಿಯಲ್ಲಿ ಕರೆದೊಯ್ಯಲು
ಇಷ್ಟೇನಾ! ಬುಕ್ ಕಾಯುತ್ತಿದೆ!!

ಹಾಯ್ ಫ್ರೆಂಡ್,

ಏನಾದ್ರೂ ಸಾಧಿಸಲೇಬೇಕೆಂದು ನೀವು ತೆಗೆದುಕೊಂಡ ಈ ನಿರ್ಧಾರವೇ ಯಶಸ್ಸಿನ ಮೊದಲ ಹೆಜ್ಜೆ…

ಈ ಸಕ್ಸಸ್ ಅನ್ನೋದೆ ಹೀಗೆ, ಒಂದು ಸಣ್ಣ ಪ್ರಯತ್ನ, ಒಂದು ಸಣ್ಣ ಬದಲಾವಣೆಯೇ ನಮ್ಮನ್ನು ಎತ್ತರಕ್ಕೆ ಕೊಂಡೊಯ್ದು ಬಿಡುತ್ತದೆ.

ಆದರೆ ತಲುಪುವ ದಾರಿ ಸಿಗದೇ ಇದ್ದರೆ , ಅಡ್ರಸ್ ಇಲ್ಲದ ಪೋಸ್ಟ್ ನ ಹಾಗೆ ಎಲ್ಲಿಗೂ ಹೋಗಲಾಗದೆ, ಯಾವೊಂದು ಗುರಿಯನ್ನೂ ತಲುಪಲಾಗದೆ ಇದ್ದಲ್ಲಿಯೇ ಇದ್ದು ಬಿಡುತ್ತದೆ.

ಆದರೆ ಜೀವನವೂ ಹಾಗಾಗಬಾರದು, ಹಾಗಾಗಲು ಬಿಡಲೂಬಾರದು ! ಬಿಟ್ಟರೆ – ಅದು ನಮ್ಮದೇ ತಪ್ಪಾಗಿ ಬಿಡುತ್ತದೆ.

ಬದಲಾವಣೆ ಇಂದಿನಿಂದಲೇ ಶುರುವಾಗಲಿ…
ನೀವು ಮನಸ್ಸು ಮಾಡಬೇಕಷ್ಟೆ !!

ಯಶಸ್ಸು ಹೊಂದಲು ಕೆಲವು ಸಲ ತುಂಬಾ ಕಾಡಿಸುವ ಪ್ರಶ್ನೆಗಳಿಗೆ ಉತ್ತರ ಸಿಕ್ಕಿರುವುದೇ ಇಲ್ಲ. ಎಲ್ಲ ಕಡೆ ಹುಡುಕಿ, ಸಾಕಾಗಿ ಕೊನೆಗೆ ನಮ್ಮ ಕೆಲಸಗಳಲ್ಲಿ ಬ್ಯುಸಿ ಆಗುವ ನಾವು, ನಮ್ಮನ್ನು ಕಾಡುತ್ತಿರುವ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕುವ ಪ್ರಯತ್ನಕ್ಕೆ ಮತ್ತೆ ಕೈಹಾಕುವುದೇ ಇಲ್ಲ ಅಥವಾ ನಮಗೆ ಏನು ಬೇಕೆಂಬುದನ್ನೇ ಮರೆತು ಹೋಗುವಷ್ಟು ಬ್ಯುಸಿ ಆಗಿಬಿಡುತ್ತೇವೆ. ಸರಳ ಉತ್ತರಗಳು ಸಿಗಲಿ ಎಂಬ ಆಶಯ ನಮ್ಮದು.

- ಬಡಿಗೇರ್ ಪ್ರಕಾಶನ

ನೀವು ಮಾಡಬೇಕಿದ್ದಿಷ್ಟೆ!

ಹಾಗೆ ಸುಮ್ಮನೆ ! ಒಳಗೇನಿದೆಯೆಂದು….

The 10 best yoga poses for building core strength

How to find the right yoga retreat for you

How to avoid boring meals during detox

ಬೆನ್ನು ತಟ್ಟಿದವರು!

ಡಾ. ಎಚ್.ಎಸ್. ವೆಂಕಟೇಶಮೂರ್ತಿ

ಡಾ. ಎಚ್.ಎಸ್. ವೆಂಕಟೇಶಮೂರ್ತಿ

ಸಾಮಾನ್ಯವಾಗಿ ನಮ್ಮ ಸುತ್ತಲೂ ತಿರುಗುತ್ತಿರುವ ಸಂಗತಿಗಳು ಕೆಲವಿರುತ್ತವೆ. ಸಕಾರಾತ್ಮಕವಾಗಿ ನೋಡಿದರೆ ಅವು ಲಾಭಪ್ರದ. ನೇತ್ಯಾತ್ಮಕವಾಗಿ ನೋಡಿದೆವೋ ಅದು ಆತ್ಮನಾಶಕ್ಕೆ ದಾರಿ. ಬೇರೆ ಬೇರೆ ಲೇಖನಗಳಲ್ಲಿ ಈ ಸಂಗತಿಗಳನ್ನು ಬಸವರಾಜ್ ಅವರು ‘ಇಷ್ಟೇನಾ ! ‘ದಲ್ಲಿ ಹೃದ್ಯವಾಗಿ ನಿರೂಪಿಸುತ್ತಾರೆ. ಸರಳ, ಸುಂದರ ಹಾಗು ಆಹ್ಲಾದಕರ ಬರವಣಿಗೆ. ಸಂತೋಷ ಮತ್ತು ಮನೋವಿಕಾಸ ಎರಡಕ್ಕೂ ದಾರಿ ಮಾಡಿಕೊಡುವ ಬರವಣಿಗೆ. ಈ ತರುಣ ಮಿತ್ರರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು..

May 1, 2026
ಪ್ರೊ. ರಾಘವೇಂದ್ರ ಪಾಟೀಲ

ಪ್ರೊ. ರಾಘವೇಂದ್ರ ಪಾಟೀಲ

ಚೀನಿ ತತ್ವಜ್ಞಾನಿಗಳಾದ ಲಿನ್ ಯುಟಾಂಗ್ ಅವರ ‘ ದಿ ವಿಸ್ಡಮ್ ಆಫ್ ಇಂಡಿಯ‘ ಹಾಗೂ ಕನ್ಫ್ಯೂಷಿಯಸ್ ಅವರ ‘ದಿ ವಿಸ್ಡಮ್ ಆಫ್ ಕನ್ಫ್ಯೂಷಿಯಸ್’ ಇಂತಹ ತತ್ವ ಗ್ರಂಥಗಳನ್ನು ಓದಿದಾಗ ಆದ ಆನಂದವು ‘ಇಷ್ಟೇನಾ!‘ ಓದಿದಾಗ ದೊರಕಿದೆ. ಬಸವರಾಜ್ ಅವರು ಸುಂದರ ಜೀವನವನ್ನು ಕಟ್ಟಿಕೊಳ್ಳುವ 40 ಬಗೆಗಳನ್ನು ನಮ್ಮ ಮುಂದಿಡುತ್ತಾರೆ. ಇಷ್ಟೇನಾ?… ಎಂದು ಓದಿನಲ್ಲಿ ತೊಡಗುವ ನಾವು, ಕೃತಿಯ ಓದಿನ ಕೊನೆ ತಲುಪುವಷ್ಟರಲ್ಲಿ- ಆಹಾ! ಎಷ್ಟೆಲ್ಲಾ ಪಡೆದವಲ್ಲ…! ಎಂದು ಕೃತಾರ್ಥತೆಯಿಂದ ಮಾಗುವಿಕೆಯ ಪಕ್ವತೆಯನ್ನು ತೋರುವುದು ನಿಶ್ಚಿತ!

May 1, 2026
ಪ್ರೊ. ನರಹರಿ ವಿ.

ಪ್ರೊ. ನರಹರಿ ವಿ.

ನಲವತ್ತು ಅಧ್ಯಾಯಗಳ ‘ಇಷ್ಟೇನಾ!’ ಒಂದು ರೀತಿಯಲ್ಲಿ ವ್ಯಕ್ತಿತ್ವ ವಿಕಸನದಂತಹ ಪುಸ್ತಕಗಳ ಸಾಲಿಗೆ ಸೇರುವಂತಹ ಕೃತಿ. ಆಡು ಭಾಷೆಯಲ್ಲಿ ಹೇಳುತ್ತಾ ಹೋದಂತೆ ಇರುವುದರಿಂದ ಓದಿಸಿಕೊಂಡು ಹೋಗುತ್ತದೆ. ಬಸವರಾಜ್ ಅವರು ಒಳ್ಳೆಯ ಪ್ರಯತ್ನ ಮಾಡಿದ್ದಾರೆ. ಅಧ್ಯಾಯಗಳ ಹೆಸರುಗಳು ಆಪ್ತವಾಗಿ ಒಪ್ಪುವಂತಿವೆ. ವಿಚಾರಸರಣಿ, ಶೈಲಿಯ ಓಘ, ಸರಳ ಶಬ್ದಗಳ ಬಳಕೆ,ಲಘು ಹಾಸ್ಯ, ಉದಾಹರಣೆಗಳು, ಸಂದರ್ಭಗಳು, ಇತ್ಯಾದಿ ಸಮಯೋಚಿತ ಮತ್ತು ಶ್ಲಾಘನೀಯ. ‘ಇಷ್ಟೇನಾ!’ ಓದುಗರನ್ನು ಸೆಳೆಯಬಲ್ಲದು.

May 1, 2026
ರಾಧಾಕೃಷ್ಣ ಪಲ್ಲಕ್ಕಿ

ರಾಧಾಕೃಷ್ಣ ಪಲ್ಲಕ್ಕಿ

ತಮ್ಮ ಅನುಭವದ,ತಾವು ಕಂಡಿರುವ,ಮತ್ತೊಬ್ಬರ ಮಾತುಗಳನ್ನು ಕೇಳಿಸಿಕೊಳ್ಳುತ್ತಾ ಅನುಭಾವಿಯಾಗಿ ಬದುಕಿನ ಮಗ್ಗುಲುಗಳನ್ನ ಸ್ವತಃ ತಾವೇ ತಿರುಗಿ ನೋಡಿ, ಪರಿಷ್ಕರಿಸಿ ಬರೆದ ಪದಗಳ ಗುಚ್ಚ ‘ಇಷ್ಟೇನಾ!’
ಟ್ಯಾಗ್ ಲೈನ್ ಗಳನ್ನು ಬಳಸಿ ಒಂದೊಂದೇ ಎಪಿಸೋಡ್ ನಲ್ಲಿ ಬರೆದ ಸಣ್ಣ ಸಣ್ಣ ಅನುಭವದ ಅಕ್ಷರಗಳು ಓದುಗರನ್ನು ಎಚ್ಚರಿಸುತ್ತಾ ಹೋಗುತ್ತದೆ. ನಿತ್ಯ ಜೀವನದ ಅರ್ಧಸತ್ಯಗಳ ಪದಗಳ ಗಂಟಿನ ಮೇಲೆ ಕಣ್ಣಾಡಿಸಿದರೆ ಮನುಜನ ಅಂತರ್ಮುಖದ ದರ್ಶನ ಆಗುವುದು ಗ್ಯಾರಂಟಿ. ಹೇಳಬಹುದಾದ,ಹೇಳಲೇಬೇಕೆಂದೆನಿಸುವ ಬರಹಗಾರನ ನುಡಿಗಟ್ಟುಗಳು ಕೆಲವುಸಲ ಸಿಹಿ ಊಟದಂತೆ ರುಚಿಯಾಗಬಲ್ಲದು, ಕೆಲವುಸಲ ಹಾಗಲಕಾಯಿಯಂತೆ ಕಹಿ ಎನಿಸಬಹುದು. ಆದರೆ ಬದುಕಿಗೆ ಇವೆರಡು ಮುಖ್ಯವೆನಿಸಿ ಇಷ್ಟೇನಾ! ನಮ್ಮ ಜೊತೆ ಇರಲೇಬೇಕಾದ ಆಪ್ತ ಗೆಳೆಯನೆನಿಸಿಬಿಡುತ್ತದೆ

May 1, 2026
ishtena © 2023. All rights reserved. Powered by Career Aspirants